ಅನಾರೋಗ್ಯದಿಂದ ಬಳಲುತಿರುವರನು ನಿರ್ವಹಿಸುವುದು
“ಕೈಗಳನ್ನು ಇಡುವ ಮೂಲಕ” ಅನಾರೋಗ್ಯದಿಂದ ಬಳಲುತಿರುವರನು ನಿರ್ವಹಿಸುವುದು ಎರಡು ಭಾಗಗಳನ್ನು ಹೊಂದಿದೆ: ತೈಲದಿಂದ ಅಭಿಷೇಕ ಮತ್ತು ಆಶೀರ್ವಾದದೊಂದಿಗೆ ಅಭಿಷೇಕವನ್ನು ಬದ್ದಪಡಿಸುವುದು. ಪ್ರತಿಷ್ಠಿಸಿದ ತೈಲ ಲಭ್ಯವಿಲ್ಲದಿದ್ದರೆ, ಅಭಿಷೇಕವಿಲ್ಲದೆಯೇ ಮೆಲ್ಕೀಚೆದೇಕ್ ಯಾಜಕತ್ವದ ಅಧಿಕಾರದಿಂದ ಆಶೀರ್ವಾದವನ್ನು ನೀಡಬಹುದು.
ಒಬ್ಬ ಮೆಲ್ಕೀಚೆದೇಕ್ ಯಾಜಕತ್ವ ಹೊಂದಿರುವವರು ತೈಲದಿಂದ ಅಭಿಷೇಕವನ್ನು ಮಾಡುತ್ತಾರೆ. ಅವರು:
-
ವ್ಯಕ್ತಿಯ ತಲೆಯ ಮೇಲೆ ಪ್ರತಿಷ್ಠಿಸಿದ ತೈಲದ ಹನಿಯನ್ನು ಹಾಕುತ್ತಾರೆ.
-
ವ್ಯಕ್ತಿಯ ತಲೆಯ ಮೇಲೆ ತನ್ನ ಕೈಗಳನ್ನು ಲಘುವಾಗಿ ಇರಿಸಿ ಮತ್ತು ವ್ಯಕ್ತಿಯನ್ನು ಅವನ ಅಥವಾ ಅವಳ ಪೂರ್ಣ ಹೆಸರಿನಿಂದ ಕರೆಯುತ್ತಾರೆ.
-
ಅವರು ಮೆಲ್ಕೀಚೆದೇಕ್ ಯಾಜಕತ್ವ ಅಧಿಕಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳುತ್ತಾರೆ.
-
ಅವರು ಅಭಿಷೇಕಕ್ಕಾಗಿ ಮತ್ತು ಅನಾರೋಗ್ಯ ಮತ್ತು ಪೀಡಿತರನ್ನು ಆಶೀರ್ವದಿಸಲು ಪ್ರತಿಷ್ಠಿಸಿದ ತೈಲದಿಂದ ಅಭಿಷೇಕಿಸುತ್ತಿದ್ದಾರೆ ಎಂದು ಹೇಳುತ್ತಾರೆ.
-
ಯೇಸುಕ್ರಿಸ್ತನ ನಾಮದಲ್ಲಿ ಮುಕ್ತಾಯ ಮಾಡಲಾಗುತ್ತದೆ.
ಅಭಿಷೇಕವನ್ನು ಬದ್ದಪಡಿಸಲು, ಒಬ್ಬ ಅಥವಾ ಹೆಚ್ಚಿನ ಮೆಲ್ಕೀಚೆದೇಕ್ ಯಾಜಕತ್ವ ಹೊಂದಿರುವವರು ತಮ್ಮ ಕೈಗಳನ್ನು ವ್ಯಕ್ತಿಯ ತಲೆಯ ಮೇಲೆ ಲಘುವಾಗಿ ಇಡುತ್ತಾರೆ. ನಂತರ ಒಬ್ಬರು ಅಭಿಷೇಕವನ್ನು ಬದ್ದಪಡಿಸುವರು:
-
ವ್ಯಕ್ತಿಯನ್ನು ಅವನ ಅಥವಾ ಅವಳ ಪೂರ್ಣ ಹೆಸರಿನಿಂದ ಕರೆಯುತ್ತಾರೆ.
-
ಅವರು ಮೆಲ್ಕೀಚೆದೇಕ್ ಯಾಜಕತ್ವದ ಅಧಿಕಾರದಿಂದ ಅಭಿಷೇಕವನ್ನು ಬದ್ದಪಡಿಸುತಿದ್ದಾರೆ ಎಂದು ಹೇಳುತ್ತಾರೆ.
-
ಆತ್ಮದ ಮಾರ್ಗದರ್ಶನದಂತೆ ಆಶೀರ್ವಾದದ ಮಾತುಗಳನ್ನು ನೀಡುತ್ತಾರೆ.
-
ಯೇಸುಕ್ರಿಸ್ತನ ನಾಮದಲ್ಲಿ ಮುಕ್ತಾಯ ಮಾಡಲಾಗುತ್ತದೆ.