ಆಜ್ಞಾವಿಧಿಗಳು ಮತ್ತು ಘೋಷಣೆಗಳು
ಕರ್ತನ ಭೋಜನ


ಕರ್ತನ ಭೋಜನ

ಸಭೆಯ ಸದಸ್ಯರು ಸಬ್ಬತ್ ದಿನದಂದು ದೇವರನ್ನು ಆರಾಧಿಸಲು ಮತ್ತು ಕರ್ತನ ಭೋಜನದಲ್ಲಿ ಪಾಲ್ಗೊಳ್ಳಲು ಭೇಟಿಯಾಗುತ್ತಾರೆ. ಈ ಆಜ್ಞಾವಿಧಿಗಳ ಸಮಯದಲ್ಲಿ, ರಕ್ಷಕನ ಮಾಂಸ ಮತ್ತು ರಕ್ತದ ತ್ಯಾಗವನ್ನು ನೆನಪಿಟ್ಟುಕೊಳ್ಳಲು ಮತ್ತು ಅವರ ಪವಿತ್ರ ಒಡಂಬಡಿಗಳನ್ನು ನವೀಕರಿಸಲು ಅವರು ರೊಟ್ಟಿ ಮತ್ತು ನೀರನ್ನು ಸೇವಿಸುತ್ತಾರೆ.

  • ಯಾಜಕರು ಮತ್ತು ಮೆಲ್ಕೀಚೆದೇಕ್ ಯಾಜಕತ್ವ ಹೊಂದಿರುವವರು ಕರ್ತನ ಭೋಜನವನ್ನು ಆಶೀರ್ವದಿಸಬಹುದು.

  • ಸಭಾಸೇವಕರು, ಬೋಧಕರು, ಯಾಜಕರು ಮತ್ತು ಮೆಲ್ಕೀಚೆದೇಕ್ ಯಾಜಕತ್ವ ಹೊಂದಿರುವವರು ಕರ್ತನ ಭೋಜನವನ್ನು ರವಾನಿಸಬಹುದು.

  1. ರೊಟ್ಟಿಯನ್ನು ಆಶೀರ್ವದಿಸುವ ವ್ಯಕ್ತಿಯು ಮೊಣಕಾಲೂರಿ ರೊಟ್ಟಿಗಾಗಿ ಕರ್ತನ ಭೋಜನದ ಪ್ರಾರ್ಥನೆಯನ್ನು ಹೇಳುತ್ತಾರೆ (ಉಪದೇಶ ಮತ್ತು ಒಡಂಬಡಿಕೆಗಳು 20:77 ನೋಡಿ).

    ಓ ದೇವರೇ, ನಿತ್ಯ ತಂದೆಯೇ, ಈ ರೊಟ್ಟಿಯನ್ನು ಸೇವಿಸುವ ಎಲ್ಲ ಆತ್ಮಗಳನ್ನು ಆಶೀರ್ವದಿಸಿ ಮತ್ತು ಪವಿತ್ರಗೊಳಿಸಿ ಎಂದು ನಿಮ್ಮ ಮಗನಾದ ಯೇಸುಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ಕೋರುತ್ತೇವೆ, ಅವರು ನಿಮ್ಮ ಮಗನ ದೇಹದ ನೆನಪಿನಲ್ಲಿ ಸೇವಿಸಲ್ಲಿ. ಓ ದೇವರೇ, ನಿತ್ಯ ತಂದೆಯೇ, ಅವರು ನಿಮ್ಮ ಮಗನ ಹೆಸರನ್ನು ತಮ್ಮ ಮೇಲೆ ತೆಗೆದುಕೊಳ್ಳಲು ಮತ್ತು ಸದಾ ಆತನನ್ನು ನೆನಪಿಟ್ಟುಕೊಳ್ಳಲು ಮತ್ತು ಆತನು ಅವರಿಗೆ ನೀಡಿದ ಆಜ್ಞೆಗಳನ್ನು ಪರಿಪಾಲಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ನಿಮ್ಮಗೆ ಸಾಕ್ಷಿಪಡಿಸಲಿ ಹಾಗು ಅವರು ಸದಾ ಆತನ ಆತ್ಮವನ್ನು ಅವರೊಂದಿಗೆ ಹೊಂದಿರಲಿ, ಆಮೇನ್.

  2. ನೀರನ್ನು ಆಶೀರ್ವದಿಸುವ ವ್ಯಕ್ತಿಯು ಮೊಣಕಾಲೂರಿ ನೀರಿಗಾಗಿ ಕರ್ತನ ಭೋಜನದ ಪ್ರಾರ್ಥನೆಯನ್ನು ಹೇಳುತ್ತಾರೆ (ಉಪದೇಶ ಮತ್ತು ಒಡಂಬಡಿಕೆಗಳು 20:79 ನೋಡಿ).

    ಓ ದೇವರೇ, ನಿತ್ಯ ತಂದೆಯೇ, ಈ ನೀರನ್ನು ಕುಡಿಯುವ ಎಲ್ಲ ಆತ್ಮಗಳನ್ನು ಆಶೀರ್ವದಿಸಿ ಮತ್ತು ಪವಿತ್ರಗೊಳಿಸಿ ಎಂದು ನಿಮ್ಮ ಮಗನಾದ ಯೇಸುಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ಕೋರುತ್ತೇವೆ. ಅವರು ಅದನ್ನು ನಿಮ್ಮ ಮಗನು ಅವರಿಗಾಗಿ ಚೆಲ್ಲಿದ್ದ ರಕ್ತದ ನೆನಪಿಗಾಗಿ ಮಾಡಲಿ. ಮತ್ತು ಓ ದೇವರೇ, ನಿತ್ಯ ತಂದೆಯೇ, ಅವರು ಸದಾ ಆತನನ್ನು ನೆನಪಿಪಿಡುತ್ತಾರೆ ಎಂಬುದನ್ನು ನಿಮ್ಮಗೆ ಸಾಕ್ಷಿಪಡಿಸಲಿ; ಹಾಗು ಅವರು ಸದಾ ಆತನ ಆತ್ಮವನ್ನು ಅವರೊಂದಿಗೆ ಹೊಂದಿರಲಿ, ಆಮೇನ್.