ಎಲ್ಲರಿಗೂ ಸ್ವಾಗತ. ನಿಮ್ಮ ಹತ್ತಿರದ ಸಭೆಗೆ ಭೇಟಿ ನೀಡಿ.

ನಾವು ನಮಗೆ ಸಾದ್ಯವಾದಷ್ಟು ಇತರರನ್ನು ಪ್ರೀತಿಸುವ ಮತ್ತು ಸೇವೆ ಸಲ್ಲಿಸುವಂತಹ ಕ್ರಿಸ್ತರ-ಕೇಂದ್ರಿತ ಸಮುದಾಯವಾಗಿದ್ದೇವೆ. ಇಲ್ಲಿ ನಿಮಗಾಗಿ ಒಂದು ಜಾಗವಿದೆ.
ನಿಮ್ಮ ಹತ್ತಿರದ ಸಭೆಯ‌ನ್ನು ಕಂಡುಹಿಡಿಯಿರಿ.
People in Lima, Peru: Attending Church

ಸಾಮಾನ್ಯ ಪ್ರಶ್ನೆಗಳು

ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆಯ ಸದಸ್ಯರು ಕ್ರಿಸ್ತಮತದವರೇ ?

ಖಂಡಿತವಾಗಿ! ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆಯ ಸದಸ್ಯರಾಗಿ, ನಾವುಯೇಸು ಕ್ರಿಸ್ತರುದೇವರ ಮಗ ಎಂದು ಮತ್ತು ಪ್ರಪಂಚದ ರಕ್ಷಕರೆಂದು ನಂಬುತ್ತೇವೆ. ಆತನು ನಾವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಮ್ಮೆಲ್ಲರನ್ನೂ ಪ್ರೀತಿಸುತ್ತಾನೆ. ನಾವು ನಮ್ಮನ್ನು ಯೇಸುವಿನ ನಿಷ್ಠಾವಂತ ಅನುಯಾಯಿಗಳೆಂದು ಪರಿಗಣಿಸುತ್ತೇವೆ. ನಮ್ಮ ಕೆಲವು ನಂಬಿಕೆಗಳು ವಿಭಿನ್ನವಾಗಿದ್ದರೂ, ಅವರ ಜೀವನ, ಸೇವೆ, ತ್ಯಾಗ ಮತ್ತು ಪುನರುತ್ಥಾನದ ಮೂಲಕ, ಯೇಸು ಕ್ರಿಸ್ತರು ನಮ್ಮನ್ನು ಪಾಪ, ಸಂಕಟ ಮತ್ತು ಮರಣದಿಂದ ರಕ್ಷಿಸುತ್ತಾರೆ ಎಂದು ನಾವು ನಂಬುತ್ತೇವೆ.

ನಮ್ಮನಂಬಿಕೆಗಳುಬಗ್ಗೆ ಇನ್ನಷ್ಟು ಕಲಿಯಿರಿ.

ಸಭೆಯ ಆರಾಧನೆಗಳು ಹೇಗಿರುತ್ತವೆ?

ಸಭೆಯ ಆರಾಧನಾ ಸಮಯಗಳು ಸಮೂಹದಿಂದ ಸಮೂಹಕ್ಕೆ ಬದಲಾಗುತ್ತವೆ. ಹೇಗಾದರು, ಪ್ರತಿಯೊಬ್ಬರಿಗಾಗಿರುವ ಒಂದು ಮುಖ್ಯ ಆರಾಧನೆಯನ್ನು ನೀವು ಯಾವಾಗಲೂ ಅವಲಂಬಿಸಬಹುದು, ನಂತರ ಮಕ್ಕಳಿಗೆ, ಯುವಕರಿಗೆ ಮತ್ತು ವಯಸ್ಕರಿಗೆ ತರಗತಿಗಳಿರುವವು.

ಪ್ರತಿಯೊಬ್ಬರಿಗಾಗಿರುವ ಆರಧನೆಯನ್ನು “ಕರ್ತನ ಭೋಜನ ಕೂಟ” ಎಂದು ಕರೆಯಲಾಗುತ್ತದೆ. ಈ ಅಧಿವೇಶನವು ಗೀತೆಗಳು, ಪ್ರಾರ್ಥನೆಗಳು ಮತ್ತು ಸಭೆಯ ವಿವಿಧ ಸದಸ್ಯರಿಂದ ಪ್ರತಿ ವಾರ ನೀಡಲಾದ ಪ್ರಸಂಗಗಳನ್ನು (ಅಥವಾ “ಭಾಷಣಗಳು”) ಒಳಗೊಂಡಿರುತ್ತದೆ. ಆದರೆ ರಕ್ಷಕನನ್ನು ನೆನಪಿಟ್ಟುಕೊಳ್ಳಲು ನಾವು ಕರ್ತನ ಭೋಜನವನ್ನು (ಸಂಸ್ಕಾರಕ್ಕೆ ಸಮಾನವಾದದ್ದು) ತೆಗೆದುಕೊಳ್ಳುವುದು ಅಧಿವೇಶನದ ಅತ್ಯಂತ ಪ್ರಮುಖ ಭಾಗವಾಗಿದೆ.

ಭಾನುವಾರದ ಆರಾಧನೆಗಳು ಬಗ್ಗೆ ಇನ್ನಷ್ಟು ತಿಳಿಯಿರಿ ಅಥವಾ ನಿಮ್ಮ ಹತ್ತಿರದ ಸಭೆಯನ್ನು ಹುಡುಕಿ .

ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆಯು ಪವಿತ್ರಾಲಯಗಳನ್ನು ಏಕೆ ಹೊಂದಿದೆ?

ಕಡೆ ದಿನದ ಸಂತರಿಗೆ,ಪವಿತ್ರಾಲಯವು ಇತರ ಸಭೆಯ ಕಟ್ಟಡಗಳಿಗಿಂತ ವಿಭಿನ್ನವಾಗಿರುತ್ತದೆ. ಪವಿತ್ರಾಲಯವು ಕಡೆ ದಿನದ ಸಂತರರು ದೇವರು ಮತ್ತು ಯೇಸುಕ್ರಿಸ್ತರ ಬಗ್ಗೆ ವಿಶೇಷ ಸೂಚನೆಯನ್ನು ಪಡೆಯುವ ಸ್ಥಳವಾಗಿದೆ. ಪವಿತ್ರಾಲಯದಲ್ಲಿ, ಸದಸ್ಯರು ದೇವರೊಂದಿಗೆ ಶಾಶ್ವತ ಒಡಂಬಡಿಕೆಗಳನ್ನು (ಅಥವಾ ವಾಗ್ದಾನಗಳನ್ನು) ಮಾಡುತ್ತಾರೆ. ಇದು ಆಜ್ಞೆಗಳನ್ನು ಪಾಲಿಸುವಂತೆ, ಯೇಸುಕ್ರಿಸ್ತರ ಸುವಾರ್ತೆಯನ್ನು ಜೀವಿಸುವಂತೆ, ವಿವಾಹದಲ್ಲಿ ನಿಷ್ಠಾವಂತರಾಗಿರುವಂತೆ ಮತ್ತು ನಮ್ಮಲ್ಲಿರುವದನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಕಾಳಜಿ ವಹಿಸಲು ಸಹಾಯ ಮಾಡುವಂತಹ ವಾಗ್ದಾನಗಳನ್ನು ಒಳಗೊಂಡಿದೆ.

ಅಲ್ಲದೆ,ಕುಟುಂಬಗಳು ಶಾಶ್ವತವಾಗಿರುತ್ತವೆ, ಎಂದು ನಾವು ನಂಬಿರುವುದರಿಂದ, ಪವಿತ್ರಾಲಯಗಳ ಒಳಗೆ ಮಾಡುವ ಹೆಚ್ಚಿನ ಕೆಲಸವು ಕೌಟುಂಬಿಕ ಬಂಧಗಳನ್ನು ಇನ್ನಷ್ಟು ಬಲಪಡಿಸುವುದಾಗಿದೆ. ಪವಿತ್ರಾಲಯದಲ್ಲಿ ವಿವಾಹಗಳು ಶಾಶ್ವತವಾಗಿ ಉಳಿಯಲು ನಿರ್ವಹಿಸಲಾಗುತ್ತದೆ “ಮರಣವು ನಿಮ್ಮನ್ನು ಬೇರೆ ಮಾಡುವವರೆಗೂ” ಮಾತ್ರವಲ್ಲ. ಪೋಷಕರು ಮತ್ತು ಮಕ್ಕಳು ಪವಿತ್ರಾಲಯಗಳಲ್ಲಿ ಶಾಶ್ವತ ಕುಟುಂಬಗಳಾಗುತ್ತಾರೆ. ಪೂರ್ವಜರು,ತಮ್ಮ ಪರವಾಗಿ ಯಾರಾದರೂ ಪವಿತ್ರ ಆಜ್ಞಾವಿಧಿಗಳನ್ನು ನಿರ್ವಹಿಸಿದರೆ ಮತ್ತು ಆ ಸೇವೆಯ ಕಾರ್ಯವನ್ನು ಅವರು ಸ್ವೀಕರಿಸಿದರೆ, ಪವಿತ್ರಾಲಯದ ಎಲ್ಲಾ ಆಶೀರ್ವಾದಗಳನ್ನು ಪಡೆಯಬಹುದು. ಪಬಿತ್ರಾಲಯಗಳು ಕಾರ್ಯನಿರತ ಸ್ಥಳಗಳು!

ಮಾರ್ಮನ್ ಗ್ರಂಥ ಎಂದರೇನು?

ಮಾರ್ಮನ್ ಗ್ರಂಥವು ನಮಗೆ ದೇವರು ಮತ್ತು ಯೇಸು ಕ್ರಿಸ್ತರ ಬಗ್ಗೆ ಕಲಿಸುವ ವೇದವಾಕ್ಯ ಪ್ರೇರಿತ ಪುಸ್ತಕವಾಗಿದೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ನಿರ್ದೇಶನವನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ ಮತ್ತು ಯೇಸು ಕ್ರಿಸ್ತರೊಂದಿಗೆ ಹತ್ತಿರವೆನಿಸುವ ಭಾವನೆ ನೀಡಿ ನಮಗೆ ಸಹಾಯ ಮಾಡುತ್ತದೆ. ಹೆಸರು ಎಲ್ಲಿಂದ ಬರುತ್ತದೆ? ನೂರಾರು ವರ್ಷಗಳ ಹಿಂದೆ, ಮಾರ್ಮನ್ ಎಂಬ ಪ್ರಾಚೀನ ಪ್ರವಾದಿಯು ತನ್ನ ಜನರ ದಾಖಲೆಯನ್ನು ಸಂಗ್ರಹಿಸಿದನು. ನಾವು ಎದುರಿಸುವ ಅದೇ ರೀತಿಯ ಸವಾಲುಗಳನ್ನು ಅವರು ಬಹಳಷ್ಟು ಎದುರಿಸಿದರು. ಮತ್ತು .ನಮ್ಮಂತೆಯೇ ಅವರು, ಯೇಸು ಕ್ರಿಸ್ತರ ಕಡೆಗೆ ತೊಡಗಿಸಿಕೊಂಡಾಗ ಬಲವನ್ನು ಕಂಡುಕೊಂಡರು ಸುವಾರ್ತೆಯ ಬೋಧಕರುಗಳೊಂದಿಗೆ ಮಾರ್ಮನ್ ಗ್ರಂಥದ ಪರಿಚಯವನ್ನು ಪಡೆಯಿರಿ.

.ಮೋರ್ಮನ್ ಗ್ರಂಥವು ಸತ್ಯವೇದದೊಂದಿಗೆ ಪ್ರಪಂಚದ ರಕ್ಷಕರಾಗಿ ಮತ್ತು ವಿಮೋಚಕರಾಗಿ ಯೇಸು ಕ್ರಿಸ್ತರ ದೈವಿಕ ಉದ್ದೇಶಕ್ಕೆ ಮತ್ತು ಆತನ ಇತರ ಸಾಕ್ಷಿಯಾಗಿ ಊಳಿದುಕೊಂಡಿದೆ. ಒಟ್ಟಾಗಿ, ಸತ್ಯವೇದ ಮತ್ತು ಮಾರ್ಮನ್ ಗ್ರಂಥವು ದೇವರಿಗೆ ನಮ್ಮೆಲ್ಲರ ಮೇಲಿರುವ ಶ್ರೇಷ್ಠ ಪ್ರೀತಿಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಆತನಿಗೆ ಹತ್ತಿರವಾಗಲು ನಮಗೆ ಸಹಾಯ ಮಾಡುತ್ತದೆ. 

ಸತ್ಯವೇದ ಮತ್ತು ಮಾರ್ಮನ್ ಗ್ರಂಥವು ಹೇಗೆ ಒಟ್ಟಿಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಕಲಿಯಿರಿ.

ನಾವು ಸತ್ಯವೇದವನ್ನು ನಂಬುತ್ತೇವೆಯೇ?

ಹೌದು. ಸತ್ಯವೇದವು ದೇವರ ವಾಕ್ಯವಾಗಿದೆ, ವೇದವಾಕ್ಯದ ಪವಿತ್ರ ಸಂಪುಟವಾಗಿದೆ ಮತ್ತು ಅದರ ಬೋಧನೆಗಳನ್ನು ಅನುಸರಿಸುವುದು ನಮ್ಮ ಜೀವನದಲ್ಲಿ ಆನಂದವನ್ನು ತರುತ್ತದೆ. ಸತ್ಯವೇದದ ಜೊತೆಗೆ, ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆಗೆ ವಿಶಿಷ್ಟವಾದ ವೇದವಾಕ್ಯದ ಇತರ ಪುಸ್ತಕಗಳಲ್ಲಿಯೂ ಸಹ ನಾವು ಸ್ಫೂರ್ತಿಯನ್ನು ಕಾಣುತ್ತೇವೆ. ದೇವರು ಮತ್ತು ಯೇಸು ಕ್ರಿಸ್ತರ ಕುರಿತಾದ ಪ್ರಮುಖ ಸತ್ಯಗಳನ್ನು ನಮಗೆ ಕಲಿಸಲು ಅವುಗಳೆಲ್ಲವು ಒಟ್ಟಾಗಿ ಕೆಲಸ ಮಾಡುತ್ತವೆ.

ಸತ್ಯವೇದದಲ್ಲಿ ನಮ್ಮ ನಂಬಿಕೆಯ ಕುರಿತು ಇನ್ನಷ್ಟು ಕಲಿಯಿರಿ.

ಇನ್ನಷ್ಟು ವೀಕ್ಷಿಸಿ

ದೇವರಿಗೆ ಹತ್ತಿರವಾಗಿ ಬೆಳೆಯಿರಿ. ಸುವಾರ್ತೆಯ ಬೋಧಕರುಗಳನ್ನು ಭೇಟಿ ಮಾಡಿ.

ಆನ್‌ಲೈನ್‌ನಲ್ಲಿ ಅಥವಾ ವೈಯಕ್ತಿಕವಾಗಿ ಭೇಟಿ ಮಾಡಿ. ನಾವು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಮತ್ತು ನಿಮ್ಮ ಸ್ಥಳೀಯ ಸಭೆಯ ಸಮುದಾಯಕ್ಕೆ ನಿಮ್ಮನ್ನು ಪರಿಚಯಿಸುತ್ತೇವೆ.

ಭೇಟಿಗೆ ವಿನಂತಿಸಿ
Two sister missionaries prepare to ride the subway in Hong Kong

ಯೇಸು ಕ್ರಿಸ್ತರ ಮೇಲೆ ಕೇಂದ್ರೀಕರಿಸಲಾದ ವಿಶ್ವಾಸದಿಂದ ಕೂಡಿದ ಸಮುದಾಯ

Four Corners: Primary Children
ಸಭೆ‌ಯಲ್ಲಿ ಏನನ್ನು ನಿರೀಕ್ಷಿಸಬಹುದು
ಸಭೆಯು ದೈನಂದಿನ ಜೀವನದ ಗೊಂದಲದಿಂದ ಒಂದು ಆಶ್ರಯವಾಗಿದೆ — ನೀವು ಯೇಸುವಿನಂತೆ ಆಗಲು ಪ್ರಯತ್ನಿಸುತ್ತಿರುವ ಇತರ ನಂಬಿಕೆಯುಳ್ಳವರೊಂದಿಗೆ ದೇವರನ್ನು ಆರಾಧಿಸುವ ಸ್ಥಳವಾಗಿದೆ. ನೀವು ಭೇಟಿ ನೀಡುವಂತಾಗಲು ನಾವು ಇಚ್ಚಿಸುತ್ತೇವೆ!
ಸಭೆ‌ಯಲ್ಲಿ ಏನನ್ನು ನಿರೀಕ್ಷಿಸಬಹುದು
Pacific, New Zealand, Stock Photos
ನಮ್ಮ ನಂಬಿಕೆಗಳು
ನಮ್ಮ ಎಲ್ಲಾ ನಂಬಿಕೆಗಳು ದೇವರು ಮತ್ತು ಯೇಸು ಕ್ರಿಸ್ತರ ಮೇಲೆ ಕೇಂದ್ರೀಕೃತವಾಗಿವೆ. ನಾವು ಏನನ್ನು ನಂಬುತ್ತೇವೆ ಮತ್ತು ಆ ಪ್ರಮುಖ ನಂಬಿಕೆಗಳು, ರಕ್ಷಕರನ್ನು ಅನುಸರಿಸಲು ನಿಮ್ಮನ್ನು ಹೇಗೆ ಪ್ರೇರೇಪಿಸುತ್ತವೆ ಎಂಬುದರ ಕುರಿತು ಇನ್ನಷ್ಟು ಕಲಿಯಿರಿ.
ನಮ್ಮನ್ನು ತಿಳಿದುಕೊಳ್ಳಿ
Pacific, Tonga, Stock Photos
ನಮ್ಮನ್ನು ತಿಳಿದುಕೊಳ್ಳಿ
ನೀವು ಪ್ರಪಂಚದಾದ್ಯಂತ ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆಯ ಸದಸ್ಯರನ್ನು ಕಾಣಬಹುದು. ನಾವು ನಿಮ್ಮ ಸ್ನೇಹಿತರು ಮತ್ತು ನೆರೆಹೊರೆಯವರು, ಪ್ರಪಂಚವನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಕೂಡಿ ಕೆಲಸ ಮಾಡುತ್ತಿದ್ದೇವೆ.

ಸಭೆಯಿಂದ ಇತ್ತೀಚಿನ ಸುದ್ದಿಗಳನ್ನು ಪಡೆಯಿರಿ.

ಪ್ರಪಂಚದಾದ್ಯಂತ ಒಳ್ಳೆಯ ಸಂಗತಿಗಳು ನಡೆಯುತ್ತಿವೆ. ಸಭೆಯ ಯೋಜನೆಗಳು, ಘಟನೆಗಳು, ದುರಂತ ನೆರವಿನ ಪ್ರಯತ್ನಗಳು ಮತ್ತು ಹೆಚ್ಚಿನವುಗಳ ಕುರಿತು ಪ್ರಸ್ತುತ ನವೀಕರಣಗಳನ್ನು ಪಡೆಯಿರಿ.

ಸಮಾಚಾರ ಕೊಠಡಿಗೆ ಭೇಟಿ ನೀಡಿ
Chile: Family Life
ನಿಮ್ಮ ಹತ್ತಿರದ ಸಭೆಯ‌ನ್ನು
ಕಂಡುಹಿಡಿಯಿರಿ
ಸುವಾರ್ತೆಯ ಬೋಧಕರುಗಳನ್ನು ಬೇಟಿ ಮಾಡಿ
ಮಾರ್ಮನ್ ಗ್ರಂಥವನ್ನು ಅಧ್ಯಯನ ಮಾಡಿ