ನಾವು ಯಾರು
ಯೇಸು ಕ್ರಿಸ್ತನ ಕಡೆ ದಿನಗಳ ಸಂತರ ಸಭೆಯ ಸದಸ್ಯರು, ದೇವರಲ್ಲಿ ಮತ್ತು ಅವರ ಮಗನಾದ ಯೇಸು ಕ್ರಿಸ್ತರಲ್ಲಿ ಹಂಚಿಕೊಂಡ ನಂಬಿಕೆಯೊಂದಿಗೆ ಪ್ರಪಂಚದಾದ್ಯಂತ ಜನರ ವೈವಿಧ್ಯಮಯ ಸಮುದಾಯವನ್ನು ರೂಪಿಸುತ್ತಾರೆ.
ಸಕ್ರಿಯ ನಂಬಿಕೆ
ಸ್ನೇಹಿತರು ಮತ್ತು ನೆರೆಹೊರೆಯವರು
ನಾವು ಪ್ರಪಂಚದಾದ್ಯಂತ ಜೀವನ ನಡೆಸುವುದನ್ನು,ಕೆಲಸ ಮಾಡುವುದನ್ನು ಮತ್ತು ಕುಟುಂಬಗಳನ್ನು ಬೆಳೆಸುವುದನ್ನು ನೀವು ಕಾಣಬಹುದು. ನಮಗೆ, ನಮ್ಮ ಸಮುದಾಯದಲ್ಲಿ ಭಾಗಿಯಾಗಿರುವುದು ಯೇಸು ಕಲಿಸಿದಂತೆ ನಾವು ನಮ್ಮ ನೆರೆಯವರನ್ನು ಪ್ರೀತಿಸುವ ಒಂದು ಮಾರ್ಗವಾಗಿದೆ.
ತೊಡಗಿರುವ ಸಮೂಹಗಳು
ಪೂರ್ಣ ಸಮಯದ ಸಂಬಳ ಪಡೆಯುವ ಪಾದ್ರಿಗಳ ಬದಲಿಗೆ, ನಾಯಕತ್ವದ ಪಾತ್ರಗಳು, ಭಾಷಣದ ನಿಯೋಜನೆಗಳು ಮತ್ತು ಇತರ ಸ್ವಯಂಸೇವಕ ಅವಕಾಶಗಳ ಮೂಲಕ ನಾವೆಲ್ಲರೂ ನಮ್ಮ ಸ್ಥಳೀಯ ಸಮೂಹಗಳಲ್ಲಿ ಒಂದು ಭಾಗವನ್ನು ವಹಿಸುತ್ತೇವೆ.
ಭಾನುವಾರವನ್ನು ಮೀರಿ ಬೆಂಬಲಿಸಿ
ನಮಗೆ, ಸಭೆಯು ಭಾನುವಾರದ ಆರಾಧನೆಗಿಂತ ಹೆಚ್ಚಾಗಿರುತ್ತದೆ-ಇದು ನಂಬಿಕೆಯನ್ನು ಬಲಪಡಿಸುವ ಮತ್ತು ಜೀವನದ ಸವಾಲುಗಳಿಗೆ ಪ್ರಾಯೋಗಿಕ ಸಹಾಯವನ್ನು ನೀಡುವ ಸ್ನೇಹ ಮತ್ತು ಅನುಭವಗಳ ಮೂಲಕ ಬೆಂಬಲವನ್ನು ಕಾಣಬಹುದಾದ ಸ್ಥಳವಾಗಿದೆ.
We Work Together as Followers of Jesus Christ
Improving lives and building strong communities
ನಾವು ಕೂಡಿ ಆರಾಧಿಸುತ್ತೇವೆ
ಪ್ರಪಂಚದಾದ್ಯಂತ 30,000ಕ್ಕೂ ಹೆಚ್ಚು ಸ್ಥಳೀಯ ಸಮೂಹಗಳಲ್ಲಿ, ಜನರು ತಮ್ಮ ಸಮುದಾಯದ ಇತರರೊಂದಿಗೆ ಆರಾಧಿಸಲು, ಪ್ರಾರ್ಥಿಸಲು, ಸ್ತೋತ್ರಗೀತೆಗಳನ್ನು ಹಾಡಲು ಮತ್ತು ಯೇಸು ಕ್ರಿಸ್ತನ ಸುವಾರ್ತೆಯನ್ನು ಅಧ್ಯಯನ ಮಾಡಲು ಸಂಪರ್ಕಿಸುತ್ತಾರೆ.
ನಾವು ಕೂಡಿ ಕಲಿಯುತ್ತೇವೆ.
ವಾರದ ಅವಧಿಯಲ್ಲಿ, ಎಲ್ಲಾ ವಯಸ್ಸಿನ ಜನರು ವರ್ಗಗಳಲ್ಲಿ ಸೇರುತ್ತಾರೆ, ಉದಾಹರಣೆಗೆ ಯುವಕರಿಗಾಗಿ ಸೆಮಿನರಿ ಅಥವಾ ಯುವ ವಯಸ್ಕರಿಗೆ ಇನ್ಸ್ಟಿಟ್ಯೂಟ್, ಯೇಸುವಿನ ಬೋಧನೆಗಳನ್ನು ಕೂಡಿ ಅಧ್ಯಯನ ಮಾಡಲು ಸೇರುತ್ತಾರೆ.
ನಾವು ಇತರರಿಗೆ ಸೇವೆ ಸಲ್ಲಿಸುತ್ತೇವೆ
ಸೇವಾ ಯೋಜನೆಗಳು ಸಭೆಯ ಚಟುವಟಿಕೆಯ ನಿಯಮಿತ ಅಂಶವಾಗಿದೆ ಮತ್ತು ನಮ್ಮ ನೆರೆಯವರನ್ನು ಪ್ರೀತಿಸುವ ದೇವರ ಆಜ್ಞೆಯನ್ನು ನಾವು ಪಾಲಿಸುವ ಪ್ರಮುಖ ಮಾರ್ಗವಾಗಿದೆ.
ನಾವು ಸಂಬಂಧಗಳನ್ನು ನಿರ್ಮಿಸುತ್ತೇವೆ
ನಮ್ಮ ಸಮೂಹಗಳು ನಾವು ವಾಸಿಸುವ ನೆರೆಹೊರೆಗಳ ಒಂದು ಭಾಗವಾಗಿದೆ, ಮತ್ತು ನಾವು ಉತ್ತಮ ನೆರೆಹೊರೆಯವರು ಮತ್ತು ಸ್ನೇಹಿತರಾಗಲು ಶ್ರಮಿಸುತ್ತೇವೆ. ಸಾಮಾಜಿಕ ಚಟುವಟಿಕೆಗಳು ಸಭೆಯ ಸಮುದಾಯವನ್ನು ನಿರ್ಮಿಸುವ ವಿನೋದ ಮತ್ತು ಪ್ರಮುಖ ಭಾಗವಾಗಿದೆ.
ನಾವು ಕುಟುಂಬಗಳನ್ನು ಬಲಪಡಿಸುತ್ತೇವೆ
ಬಲವಾದ ಕುಟುಂಬ ಬಂಧಗಳು ಈ ಜೀವನವನ್ನು ಸಂತೋಷದಾಯಕವಾಗಿಸುತ್ತದೆ ಮತ್ತು ನಮಗೆ ಬೇಕಾದ ರೀತಿಯ ಪ್ರಪಂಚವನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಸಭೆಯ ಅನುಭವ ಮತ್ತು ಸೇವೆಗಳು ಆಳವಾದ ಮತ್ತು ಹೆಚ್ಚು ಪ್ರೀತಿಯ ಕುಟುಂಬ ಸಂಬಂಧಗಳನ್ನು ಬೆಂಬಲಿಸುತ್ತವೆ.
ನಾವು ಉತ್ತಮವಾಗುತ್ತೇವೆ
ನಾವು ಆಶಿಸುವ ರೀತಿಯ ವ್ಯಕ್ತಿಯಾಗುವುದು ನಮ್ಮ ಸಭಾ ಜೀವನದ ಪ್ರಮುಖ ಭಾಗವಾಗಿದೆ. ಸಭೆಯ ಕಾರ್ಯಕ್ರಮಗಳು ಜನರು ಯೇಸುಕ್ರಿಸ್ತರ ಸುವಾರ್ತೆಯ ಮೂಲಕ ಆಧ್ಯಾತ್ಮಿಕವಾಗಿಯೂ ಮತ್ತು ಪ್ರಾಯೋಗಿಕ ವಿಧಾನಗಳಲ್ಲಿಯೂ ಸಹ ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ.
Find Our Church Near You
Want to see how a supportive church community can benefit you? Come and see for yourself by visiting a local congregation of The Church of Jesus Christ of Latter-day Saints.
Church Leadership
“As every man hath received the gift, even so minister the same one to another as good stewards of the manifold grace of God.” –
ನಾವು ಪ್ರವಾದಿಗಳು ಮತ್ತು ಅಪೊಸ್ತಲರನ್ನು ನಂಬುತ್ತೇವೆ
ಸತ್ಯವೇದದ ಕಾಲದಲ್ಲಿ ತನ್ನ ಜನರನ್ನು ಮುನ್ನಡೆಸಲು ಯೇಸು ಕ್ರಿಸ್ತರು ಸ್ಥಾಪಿಸಿದ ಅದೇ ಮಾದರಿಯನ್ನು ಅನುಸರಿಸಿ, ಸಭೆಯನ್ನು ಇಂದು ಪ್ರವಾದಿ ಮತ್ತು ಅಪೊಸ್ತಲರು ಮುನ್ನಡೆಸುತ್ತಿದ್ದಾರೆ. ಈ ನಾಯಕರು ಅವರ ಪ್ರೇರಿತ ನಿರ್ದೇಶನದಲ್ಲಿ ಸೇವೆ ಸಲ್ಲಿಸಿ ಮತ್ತು ಕೆಲಸ ಮಾಡುತ್ತಾರೆ. ನೀವು ಅವರ ಬಗ್ಗೆ ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ನಾಯಕರು ಪ್ರಪಂಚದಾದ್ಯಂತ ಬರುವರು
ಜೀವನದ ಎಲ್ಲಾ ಹಂತಗಳಿಂದ ಬಂದ ಪುರುಷರು ಮತ್ತು ಮಹಿಳೆಯರು ಸಭೆಯ ಕೆಲಸವನ್ನು ಪ್ರಪಂಚಾದ್ಯಾಂತ ಮತ್ತು ಪ್ರಾದೇಶಿಕ ಮಟ್ಟದಲ್ಲಿ ನಿರ್ದೇಶಿಸಲು ಸಹಾಯ ಮಾಡುತ್ತಾರೆ. ಇದಕ್ಕೆ ಒಂದು ಉದಾಹರಣೆ ಎಂದರೆ, ಪರಿಹಾರ ಸಂಘವನ್ನು ಮುನ್ನಡೆಸುವ ಮಹಿಳೆಯರು
ಸ್ಥಳೀಯ ನಾಯಕರು ದಿನನಿತ್ಯದ ಜನರೇ ಆಗಿದ್ದಾರೆ.
ಪೂರ್ಣ-ಸಮಯದ ವೇತನ ಪಡೆಯುವ ಪಾದ್ರಿಗಳ ಬದಲಿಗೆ, ಸ್ಥಳೀಯ ಸಮೂಹಗಳನ್ನು ಸಭೆಯ ಸದಸ್ಯರು ತಮ್ಮ ಸಮಯವನ್ನು ಸ್ವಯಂಸೇವಕರಾಗಿ ಅರ್ಪಿಸುವ ಮೂಲಕ ಮುನ್ನಡೆಸುತ್ತಾರೆ. ಅವರು ಇತರ ದಿನನಿತ್ಯದ ಸಭೆಯ ಸದಸ್ಯರಿಂದ ಬೆಂಬಲಿತರಾಗಿದ್ದಾರೆ, ಇವರು ಭಾನುವಾರದ ಶಾಲಾ ತರಗತಿಗಗಳನ್ನು ಬೋಧಿಸುವುದಲ್ಲದೆ ಸಭೆಯ ಕಟ್ಟಡವನ್ನು ಸ್ವಚ್ಛಗೊಳಿಸುವುದರವರೆಗೂ ಪ್ರತಿಯೊಂದರಲ್ಲೂ ಸಹಾಯ ಮಾಡುತ್ತಾರೆ.
ನಾವು ಪರಸ್ಪರ ಒಬ್ಬರಿಗೊಬ್ಬರು ಕಲಿಸುತ್ತೇವೆ
ನೀವು ನಮ್ಮ ಸಮೂಹಗಳಿಗೆ ಭೇಟಿ ನೀಡಿದಾಗ, ನಾವು ಒಬ್ಬರಿಗೊಬ್ಬರು ಕಲಿಸುವುದನ್ನು ಮತ್ತು ವೇದವಾಕ್ಯದಿಂದ ಕೂಡಿ ಕಲಿಯುವುದನ್ನು ನೀವು ಗಮನಿಸಬಹುದು. ಪ್ರತಿಯೊಬ್ಬರೂ ಕೊಡುಗೆ ನೀಡಲು ಮೌಲ್ಯಯುತವಾದದ್ದನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ ಮತ್ತು ಆದ್ದರಿಂದ ನಾಯಕರು ಪ್ರವಚನ ವೇದಿಕೆಯಲ್ಲಿ ಬೋಧಿಸಲು, ಪ್ರಾರ್ಥನೆ ಮಾಡಲು ಮತ್ತು ತರಗತಿಗಳನ್ನು ಕಲಿಸಲು ವಿವಿಧ ರೀತಿಯ ಜನರನ್ನು ಕೇಳುತ್ತಾರೆ.
ವೈಯಕ್ತಿಕ ಪರಿಚಯವನ್ನು ಪಡೆಯಿರಿ
ನೀವು ನಿಮ್ಮ ಸ್ಥಳೀಯ ಸಮೂಹವನ್ನು ಭೇಟಿ ನೀಡಲು ಆಸಕ್ತಿ ಹೊಂದಿದ್ದರೆ,ನೀವು ಸಾಧ್ಯವಾದಷ್ಟು ಆರಾಮದಾಯಕವಾಗಬೇಕೆಂದು ನಾವು ಬಯಸುತ್ತೇವೆ. ಸ್ಥಳೀಯ ಸುವಾರ್ತೆಯ ಬೋಧಕರು ನಿಮ್ಮೊಂದಿಗೆ ಮುಂಚಿತವಾಗಿಯೇ ಭೇಟಿ ನೀಡಬಹುದು, ನೀವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿಸಲು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ನೀವು ಭೇಟಿ ನೀಡಲು ಸಿದ್ಧರಾಗಿರುವಾಗ ನಿಮಗಾಗಿ ಒಂದು ಆಸನವನ್ನು ಸಹ ಉಳಿಸಿಡಬಹುದು.
ನಿಮ್ಮ ಇನ್‌ಬಾಕ್ಸ್‌ಗೆ ಸ್ಫೂರ್ತಿ ನೀಡಿ
ಸಾಪ್ತಾಹಿಕ ಇಮೇಲ್‌ನಲ್ಲಿ ಉನ್ನತಿಗೇರಿಸುವ ವಿಡಿಯೋಗಳು, ಲೇಖನಗಳು ಮತ್ತು ಹೆಚ್ಚಿನದನ್ನು ಪಡೆಯಿರಿ.