ಪವಿತ್ರಾಲಯದ ವಾಗ್ದಾನಗಳು ನಮ್ಮನ್ನು ದೇವರೊಂದಿಗೆ ಮತ್ತು ಪರಸ್ಪರ ಬಂಧಿಸುತ್ತವೆ

ಯೇಸು ಕ್ರಿಸ್ತನ ತ್ಯಾಗದಿಂದಾಗಿ, ಈ ಜೀವನದ ನಂತರ ನಾವು ನಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ದೇವರೊಂದಿಗೆ ಮತ್ತೆ ಬಾಳಬಹುದು. ನಾವು ಆತನೊಂದಿಗೆ ಒಡಂಬಡಿಕೆಗಳನ್ನು ಅಥವಾ ವಾಗ್ದಾನಗಳನ್ನು ಮಾಡುವ ಮೂಲಕ ಆತನನ್ನು ಅನುಸರಿಸಲು ಆಯ್ಕೆ ಮಾಡಬಹುದು.
Both men and women walking outside the Accra Ghana Temple

ಪವಿತ್ರಾಲಯ ಎಂದರೇನು?

ಪವಿತ್ರಾಲಯಗಳು ಪವಿತ್ರ ಮತ್ತು ಪರಿಶುದ್ಧ ಸ್ಥಳಗಳಾಗಿವೆ. ನಾವು ಪವಿತ್ರಾಲಯಗಳನ್ನು ಕರ್ತನಾದ ಯೇಸು ಕ್ರಿಸ್ತನ ಆಲಯಗಳೆಂದು ಪರಿಗಣಿಸುತ್ತೇವೆ. ಪವಿತ್ರಾಲಯಗಳು, ನಾವು ಭಾನುವಾರದ ಆರಾಧನಾ ಕೂಟಗಳನ್ನು ಮತ್ತು ಇತರ ಚಟುವಟಿಕೆಗಳನ್ನು ನಡೆಸುವ ನಮ್ಮ ಸ್ಥಳೀಯ ಸಭೆಯ ಕಟ್ಟಡಗಳಿಗಿಂತ ಭಿನ್ನವಾಗಿರುತ್ತವೆ. ಪವಿತ್ರಾಲಯಗಳು ದೇವರ ಅತ್ಯಂತ ಪವಿತ್ರ ಕಾರ್ಯಕ್ಕೆ ಸಮರ್ಪಿತವಾಗಿವೆ.

ಪವಿತ್ರಾಲಯಗಳು ಸಂಕೇತಗಳಿಂದ ತುಂಬಿವೆ. ಉದಾಹರಣೆಗೆ, ಪವಿತ್ರಾಲಯಕ್ಕೆ ಹಾಜರಾಗುವವರು ದೇವರ ಮುಂದೆ ಶುದ್ಧತೆ ಮತ್ತು ಸಮಾನತೆಯನ್ನು ಸಂಕೇತಿಸಲು ಸರಳವಾದ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ. ಪವಿತ್ರಾಲಯಗಳು ಪುನೀತ, ಶಾಂತಿಯುತ ಆಶ್ರಯ ತಾಣಗಳಾಗಿವೆ, ಅಲ್ಲಿ ಯೇಸು ಕ್ರಿಸ್ತನ ಅನುಯಾಯಿಗಳು ಆತನೊಂದಿಗೆ ಹೆಚ್ಚು ಆಳವಾಗಿ ಸಂಪರ್ಕ ಸಾಧಿಸಬಹುದು.

ಬಹು ಮುಖ್ಯವಾಗಿ, ಪವಿತ್ರಾಲಯಗಳು ನಾವು ದೇವರೊಂದಿಗೆ ಪವಿತ್ರ ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಸ್ಥಳಗಳಾಗಿವೆ.
An exterior image of the Helena Montana Temple. The image is taken in the evening.

ಒಡಂಬಡಿಕೆ ಎಂದರೇನು?

ಒಡಂಬಡಿಕೆಗಳ ಮೂಲಕ ನಾವು ದೇವರೊಂದಿಗಿನ ನಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳಬಹುದು ಮತ್ತು ಆತನಿಂದ ವಿಶೇಷ ಆಶೀರ್ವಾದಗಳನ್ನು ಪಡೆಯಬಹುದು. ಒಡಂಬಡಿಕೆಯೆಂಬುದು ದೇವರು ಮತ್ತು ಆತನ ಮಕ್ಕಳ ನಡುವಿನ ಪವಿತ್ರ ವಾಗ್ದಾನವಾಗಿದೆ. ದೇವರು ಒಡಂಬಡಿಕೆಗೆ ಷರತ್ತುಗಳನ್ನು ನೀಡುತ್ತಾರೆ ಮತ್ತು ನಂತರ ಅವುಗಳನ್ನು ಸ್ವೀಕರಿಸಲು ನಮಗೆ ಆಯ್ಕೆಯನ್ನು ನೀಡುತ್ತಾರೆ.
ದೀಕ್ಷಾಸ್ನಾನವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ.

Jesus Christ is baptized in the River Jordan by John the Baptist. An angel shows this experience to Nephi after he inquires about Lehi's vision.
ನಾವು ದೀಕ್ಷಾಸ್ನಾನ ಪಡೆದಾಗ, ನಾವು ದೇವರಿಗೆ, ಆತನಿಗೆ ಸೇವೆ ಸಲ್ಲಿಸುತ್ತೇವೆ, ಆತನ ಆಜ್ಞೆಗಳನ್ನು ಪಾಲಿಸುತ್ತೇವೆ ಮತ್ತು ಯೇಸು ಕ್ರಿಸ್ತನ ಹೆಸರನ್ನು ನಮ್ಮ ಮೇಲೆ ತೆಗೆದುಕೊಳ್ಳುತ್ತೇವೆ ಎಂದು ವಾಗ್ದಾನ ಮಾಡುತ್ತೇವೆ. ನಾವು ಈ ವಿಷಯಗಳನ್ನು ಮಾಡಿದರೆ, ದೇವರು ನಮ್ಮ ಪಾಪಗಳನ್ನು ಕ್ಷಮಿಸುವುದಾಗಿ, ತನ್ನ ಪವಿತ್ರಾತ್ಮನಿಂದ ನಮ್ಮನ್ನು ಆಶೀರ್ವದಿಸುವುದಾಗಿ ಮತ್ತು ತನ್ನ ಸನ್ನಿಧಿಯಲ್ಲಿ ನಮಗೆ ನಿತ್ಯಜೀವನವನ್ನು ನೀಡುವುದಾಗಿ ವಾಗ್ದಾನ ಮಾಡುತ್ತಾರೆ.

ನಾವು ಪ್ರತಿ ಭಾನುವಾರ ಸಭೆಯಲ್ಲಿ ಕಮ್ಯುನಿಯನ್, ಎಂದೂ ಕರೆಯಲ್ಪಡುವ ಕರ್ತನ ಭೋಜನವನ್ನು ಸ್ವೀಕರಿಸುವಾಗ, ದೀಕ್ಷಾಸ್ನಾನದ ಸಮಯದಲ್ಲಿ ನಾವು ಮಾಡುವ ಒಡಂಬಡಿಕೆಗಳನ್ನು ನವೀಕರಿಸುತ್ತೇವೆ. ಈ ಕರ್ತನ ಭೋಜನವು ಯೇಸು ತನ್ನ ಮರಣದ ಮೊದಲು ತನ್ನ ಅಪೊಸ್ತಲರಿಗೆ ಪರಿಚಯಿಸಿದ ಕೊನೆಯ ಭೋಜನದ ಸಂಸ್ಕಾರದ ಮಾದರಿಯಲ್ಲಿದೆ.

ದೀಕ್ಷಾಸ್ನಾನದ ನಂತರ,ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆಯ ವಯಸ್ಕ ಸದಸ್ಯರು ಪವಿತ್ರಾಲಯದಲ್ಲಿ ದೇವರೊಂದಿಗೆ ಹೆಚ್ಚುವರಿ ಒಡಂಬಡಿಕೆಗಳನ್ನು ಮಾಡಿಕೊಳ್ಳಬಹುದು. ಈ ಒಡಂಬಡಿಕೆಗಳು ಮತ್ತು ವಾಗ್ದಾನಗಳು ಆತನೊಂದಿಗಿನ ಅವರ ಸಂಬಂಧಗಳನ್ನು ಬಲಪಡಿಸುತ್ತವೆ ಮತ್ತು ಇನ್ನೂ ಹೆಚ್ಚಿನ ಆಶೀರ್ವಾದಗಳನ್ನು ತರುತ್ತವೆ.

ಪವಿತ್ರಾಲಯದಲ್ಲಿ ನಾವು ಒಡಂಬಡಿಕೆಗಳನ್ನು ಮಾಡುತ್ತೇವೆ

ಪವಿತ್ರದಾನ

ಪವಿತ್ರದಾನ ಎಂಬ ಪದದ ಅರ್ಥ “ಉಡುಗೊರೆ.” ಪವಿತ್ರಾಲಯದ ಪವಿತ್ರದಾನದಲ್ಲಿ, ವಯಸ್ಕ ಸಭೆಯ ಸದಸ್ಯರು ಗಂಭೀರ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಾರೆ, ಇದರಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವುದು ಮತ್ತು ತಮ್ಮ ಸಮಯ ಮತ್ತು ಪ್ರತಿಭೆಗಳನ್ನು ಕರ್ತನ ಕಾರ್ಯಕ್ಕೆ ಸಮರ್ಪಿಸುವ ವಾಗ್ದಾನಗಳು ಸೇರಿವೆ. ಪ್ರತಿಯಾಗಿ, ಸದಸ್ಯರು ದೇವರ ಯೋಜನೆಯ ಬಗ್ಗೆ ಹೆಚ್ಚಿನ ಜ್ಞಾನ, ಕ್ರಿಸ್ತನ ಉದಾಹರಣೆಯನ್ನು ಅನುಸರಿಸಲು ಹೆಚ್ಚಿನ ಬಲ ಮತ್ತು ದೇವರೊಂದಿಗೆ ಶಾಶ್ವತವಾಗಿ ಬದುಕುವ ಅವಕಾಶದಂತಹ ಆಶೀರ್ವಾದಗಳನ್ನು ಪಡೆಯುತ್ತಾರೆ.

ಬದ್ದಪಡಿಸುವಿಕೆ

ಯೇಸು ಕ್ರಿಸ್ತನ ಸುವಾರ್ತೆಯ ಮಹಾನ್ ಸಂತೋಷಗಳಲ್ಲಿ ಒಂದು, ನಮ್ಮ ಮರ್ತ್ಯ ಜೀವನದ ನಂತರವೂ ಕುಟುಂಬ ಸಂಬಂಧಗಳು ಮುಂದುವರಿಯಬಹುದು ಎಂಬ ವಾಗ್ದಾನವಾಗಿದೆ. ಪವಿತ್ರಾಲಯದಲ್ಲಿ, ಕುಟುಂಬಗಳು ನಿತ್ಯತ್ವಕ್ಕಾಗಿ ಸಂಪರ್ಕ ಹೊಂದಿವೆ ಅಥವಾ “ಬದ್ಧಪಡಿಸುವಿಕೆ” ಮಾಡಲ್ಪಟ್ಟಿವೆ.

ವಿವಾಹದ ಬದ್ಧಪಡಿಸುವಿಕೆಯ ಸಮಾರಂಭದಲ್ಲಿ, ಗಂಡ ಮತ್ತು ಹೆಂಡತಿ ಬಲಿಪೀಠದ ಎದುರು ಮೊಣಕಾಲು ಊರಿ ಪರಸ್ಪರ ಮತ್ತು ದೇವರೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಾರೆ. ಅವರು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಗೌರವಿಸಿ ಪ್ರೀತಿಸುವುದಾಗಿ ಮತ್ತು ಯೇಸು ಕ್ರಿಸ್ತನ ಬೋಧನೆಗಳು ಮತ್ತು ಮಾದರಿಯನ್ನು ಅನುಸರಿಸಲು ಬದ್ಧರಾಗುವುದಾಗಿ ವಾಗ್ಧನ ಮಾಡುತ್ತಾರೆ. ಪ್ರತಿಯಾಗಿ, ಅವರ ವಿವಾಹವು ಮತ್ತು ಕುಟುಂಬವು ಶಾಶ್ವತವಾಗಿ ಉಳಿಯುತ್ತದೆ ಎಂದು ಅವರಿಗೆ ವಾಗ್ಧನ ನೀಡಲಾಗುತ್ತದೆ.
Young couple stands outside the Ogden Utah Temple. They are looking out at the temple in the background with the Angel Moroni being almost top center of the image. He is wearing a dark blue suit with white collared shirt. She is in a white dress. It is late afternoon/early evening.

ಮೃತ ಪೂರ್ವಜರ ಪರವಾಗಿ ಕೆಲಸ ಮಾಡಿ

ನಾವು ಒಬ್ಬ ನ್ಯಾಯವಂತ ಮತ್ತು ಕರುಣಾಮಯಿ ದೇವರನ್ನು ನಂಬುತ್ತೇವೆ, ನಿಯಂತ್ರಿಸಲಾಗದ ಸಂದರ್ಭಗಳ ಕಾರಣದಿಂದಾಗಿ ಅವರು ತನ್ನ ಮಕ್ಕಳಲ್ಲಿ ಯಾರಿಗೂ ನಿತ್ಯತ್ವದ ಆಶೀರ್ವಾದಗಳನ್ನು ನಿರಾಕರಿಸುವುದಿಲ್ಲ.

ಮರಣ ಹೊಂದುವ ಮೊದಲು ಆ ಆಜ್ಞಾವಿಧಿಗಳನ್ನು ಸ್ವೀಕರಿಸಲು ಅವಕಾಶವನ್ನು ಹೊಂದಿರದ ನಮ್ಮ ಪೂರ್ವಜರ ಪರವಾಗಿ ದೀಕ್ಷಾಸ್ನಾನ‌ಗಳು, ಪವಿತ್ರದಾನಗಳು ಮತ್ತು ಬದ್ದಪಡಿಸುವಿಕೆಗಳನ್ನು ಪವಿತ್ರಾಲಯದಲ್ಲಿ ಮಾಡುತ್ತೇವೆ. ಈ ಕೆಲಸದಲ್ಲಿ, ಜೀವಂತವಾಗಿರುವ ಯಾರಾದರೂ ಮರಣ ಹೊಂದಿದ ವ್ಯಕ್ತಿಯ ಪರವಾಗಿ ಅಥವಾ ಬದಲಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಈ ಪವಿತ್ರ ಸಮಾರಂಭಗಳನ್ನು ಪವಿತ್ರಾಲಯಗಳಲ್ಲಿ ಮಾತ್ರ ನಡೆಸಲಾಗುತ್ತದೆ. ನಮ್ಮ ಪೂರ್ವಜರು ಅವರಿಗಾಗಿ ಪ್ರೀತಿಯಿಂದ ಮಾಡಿದ ಈ ಅರ್ಪಣೆಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಆಯ್ಕೆ ಮಾಡಬಹುದು ಎಂದು ನಾವು ನಂಬುತ್ತೇವೆ.

ಸಾಮಾನ್ಯ ಪ್ರಶ್ನೆಗಳು

  • ಸಭೆಗಳನ್ನು ಭಾನುವಾರದ ಆರಾಧನಾ ಸೇವೆಗಳು, ವಾರದ ದಿನಗಳ ಯುವ ಚಟುವಟಿಕೆಗಳು, ಸಾಮಾಜಿಕ ಕೂಟಗಳು ಮತ್ತು ಇತರ ಸಮುದಾಯ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ, ಆದರೆ ಪವಿತ್ರಾಲಯಗಳನ್ನು ವಿಶೇಷವಾಗಿ ಪವಿತ್ರ ಸೇವೆ ಮತ್ತು ಸಮಾರಂಭಗಳಿಗಾಗಿ ಪ್ರತ್ಯೇಕಿಸಲಾಗಿದೆ.
  • ಪವಿತ್ರಾಲಯವನ್ನು ಅದರ ಕಟ್ಟಡದ ಮೇಲೆ “ಕರ್ತನ ಆಲಯ” ಎಂಬ ಪದಗಳಿಂದ ಗುರುತಿಸಬಹುದು, ಆದರೆ ಸಾಮಾನ್ಯ ಪ್ರಾರ್ಥನಾ ಸಭೆಯ ಹೊರಭಾಗದಲ್ಲಿ “ಸಂದರ್ಶಕರಿಗೆ ಸ್ವಾಗತ” ಮತ್ತು “ಯೇಸು ಕ್ರಿಸ್ತನ ಕಡೆ-ದಿನಗಳ ಸಂತರ ಸಭೆ” ಎಂಬ ಪದಗಳಿರುತ್ತವೆ.
  • ಗುಂಪು ಸಂವಹನ ಮತ್ತು ಸಮುದಾಯದ ನಿರ್ಮಾಣವು ಪ್ರಾರ್ಥನಾ ಸಭೆಗಳಲ್ಲಿ ನಡೆಯುವ ದೊಡ್ಡ ಭಾಗವಾಗಿದ್ದರೂ, ಪವಿತ್ರಾಲಯಗಳು ವಿಶೇಷ ಗೌರವವನ್ನು ಹೊಂದಿವೆ. ಪವಿತ್ರಾಲಯಗಳಲ್ಲಿ, ಕರ್ತನ ಬಗ್ಗೆ ಗೌರವವನ್ನು ಕಾಪಾಡಿಕೊಳ್ಳಲು ಜನರು ಶಾಂತ ಮತ್ತು ಚಿಂತನಶೀಲರಾಗಿರುತ್ತಾರೆ.
ನೀವು ಕೆಲವೊಮ್ಮೆ ಪವಿತ್ರಾಲಯದ ಒಳಗೆ ಹೋಗಬಹುದು! ಪವಿತ್ರಾಲಯಗಳನ್ನು ಮೊದಲ ಬಾರಿ ನಿರ್ಮಿಸಿದಾಗ ಅಥವಾ ಅವುಗಳು ವ್ಯಾಪಕ ನವೀಕರಣಗಳಿಗೆ ಒಳಗಾದ ನಂತರ, ಸಾರ್ವಜನಿಕರಿಗಾಗಿ ತೆರೆದ ಮನೆಗಳನ್ನು ನಡೆಸಲಾಗುತ್ತದೆ. ಅಲ್ಲದೆ, ಅನೇಕ ಪವಿತ್ರಾಲಯಗಳು ಸಂದರ್ಶಕರ ಕೇಂದ್ರಗಳು, ಕಾಯುವ ಪ್ರದೇಶಗಳು ಅಥವಾ ಎಲ್ಲರಿಗೂ ತೆರೆದಿರುವ ಸ್ಥಳಗಳನ್ನು ಹೊಂದಿವೆ.

ಪವಿತ್ರಾಲಯವು ಪೂರ್ಣಗೊಂಡ ನಂತರ, ಅದನ್ನು ಪವಿತ್ರ ಆರಾಧನೆಗೆ ಸಮರ್ಪಿಸಲಾಗುತ್ತದೆ. ಪವಿತ್ರಾಲಯಗಳಲ್ಲಿ ನಾವು ಮಾಡುವ ಕೆಲಸದ ಪವಿತ್ರ ಸ್ವಭಾವದ ಕಾರಣ, ತಮ್ಮನ್ನು ತಾವು ಈ ಅನುಭವಕ್ಕಾಗಿ ಸಿದ್ಧಪಡಿಸಿಕೊಂಡಿರುವ ಯೇಸು ಕ್ರಿಸ್ತನ ಕಡೆ ದಿನಗಳ ಸಂತರ ಸಭೆಯ ಸದಸ್ಯರಿಗೆ ಮಾತ್ರ ತೆರೆದಿರುತ್ತದೆ.

ನೀವು ಈಗ ಪವಿತ್ರಾಲಯವನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೂ,ದೇವರ ಎಲ್ಲಾ ಮಕ್ಕಳನ್ನು ಯೇಸುಕ್ರಿಸ್ತನ ಸುವಾರ್ತೆಯ ಬಗ್ಗೆ ಇನ್ನಷ್ಟು ಕಲಿಯಲು ಮತ್ತು ಪವಿತ್ರಾಲಯದ ಆಶೀರ್ವಾದಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನಿಮಗೆ ಅನುಮತಿಸುವ ಒಡಂಬಡಿಕೆಯ ಸಂಬಂಧಗಳನ್ನು ಪ್ರವೇಶಿಸಲು ಆಹ್ವಾನಿಸಲಾಗಿದೆ.
ಒಂದು ಚಿಕ್ಕದಾದ, ಸರಳವಾದ ಸಮಾರಂಭದಲ್ಲಿ, ವಧು ಮತ್ತು ವರರು ಬಲಿಪೀಠದ ಉದ್ದಕ್ಕೂ ಕೈಜೋಡಿಸುತ್ತಾರೆ. ಅವರು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ ಮತ್ತು ರಕ್ಷಕನ ಬೋಧನೆಗಳು ಮತ್ತು ಮಾದರಿಯನ್ನು ಅನುಸರಿಸಲು ಬದ್ಧರಾಗಿರುತ್ತೇವೆ ಎಂದು ಅವರು ದೇವರೊಂದಿಗೆ ಒಡಂಬಡಿಕೆ ಮಾಡುತ್ತಾರೆ. ಪ್ರತಿಯಾಗಿ, ಅವರ ವಿವಾಹವು ಮತ್ತು ಅವರ ಕುಟುಂಬವು ಶಾಶ್ವತವಾಗಿ ಉಳಿಯುತ್ತದೆ ಎಂದು ಅವರಿಗೆ ವಾಗ್ದಾನ ನೀಡಲಾಗುತ್ತದೆ.

ಪವಿತ್ರಾಲಯದಲ್ಲಿ ವಿವಾಹವಾದ ದಂಪತಿಗಳು ಅನೇಕವೇಳೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿವಾಹದ ನಂತರ ಆರತಕ್ಷತೆ ಅಥವಾ ಇತರ ಸಾಂಸ್ಕೃತಿಕ ಸಂಪ್ರದಾಯದೊಂದಿಗೆ ಆಚರಿಸುತ್ತಾರೆ. ಪವಿತ್ರಾಲಯದ ಹೊರಗಿನ ನಾಗರಿಕ ಸಮಾರಂಭಗಳಲ್ಲಿ ಮುಂಚಿತವಾಗಿಯೇ ವಿವಾಹವಾದ ದಂಪತಿಗಳು (ಉದಾಹರಣೆಗೆ ಅವರು ಈಗಾಗಲೇ ವಿವಾಹವಾದ ನಂತರ ಸಭೆಗೆ ಸೇರಿದವರು) ಪವಿತ್ರಾಲಯದಲ್ಲಿ ಬದ್ಧಪಡಿಸುವಿಕೆಯ ಆಶೀರ್ವಾದವನ್ನೂ ಅನುಭವಿಸಬಹುದು.

ನಿಮ್ಮ ಕುಟುಂಬ ಶಾಶ್ವತವಾಗಿ ಕೂಡಿ ಇರಬಹುದು

ನಿತ್ಯ ಕುಟುಂಬದ—ವಾಗ್ದಾನ ಸೇರಿದಂತೆ ದೀಕ್ಷಾಸ್ನಾನ ಮತ್ತು ಪವಿತ್ರಾಲಯದ ಒಡಂಬಡಿಕೆಗಳ—ಆಶೀರ್ವಾದಗಳು ನಿಮ್ಮ ಜೀವನದ ಭಾಗವಾಗಬಹುದು ಎಂಬುದರ ಕುರಿತು ಸುವಾರ್ತೆಯ ಬೋಧಕರರು ನಿಮಗೆ ಹೆಚ್ಚಿನದನ್ನು ಕಲಿಸಬಹುದು.
ಭೇಟಿಗೆ ವಿನಂತಿಸಿ